Primus Civil Services Academy

Stay connected via Google News
Follow us for the latest travel updates and guides.
Add as preferred source on Google
Home / UPSC / optional / Kannada Literature / ಬಾರಿಸು ಕನ್ನಡ ಡಿಂಡಿಮವ
Operation Sindoor - Primus IAS
Current affairs

Operation Sindoor

Stay connected via Google News Follow us for the latest travel updates and guides. July 21st Current Affairs Home /

Read More »
Sesismic Waves - Primus IAS
Current affairs

Alaska Earthquakes

Stay connected via Google News Follow us for the latest travel updates and guides. July 21st Current Affairs Home /

Read More »

'ಬಾರಿಸು ಕನ್ನಡ ಡಿಂಡಿಮವ'

ದೇಶದ ಪ್ರತಿಷ್ಠಿತ ಪರೀಕ್ಷೆ ಎಂದೇ ಹೆಸರಾಗಿದೆ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗಳು. ಅವುಗಳನ್ನು ಬರೆದು ಉನ್ನತ ಹುದ್ದೆಯನ್ನು ಅಲಂಕರಿಸಬೇಕು ಎಂಬುದು ಹಲವರ ಕನಸು. ಕರ್ನಾಟಕದ ಕನ್ನಡ ವಿದ್ಯಾರ್ಥಿಗಳಿಗೆ ಅವಕಾಶಗಳು ಕಡಿಮೆ, ಉತ್ತೀರ್ಣರಾಗುವವರ ಸಂಖ್ಯೆಯೂ ಕಡಿಮೆ ಎನ್ನುವ ಮಾತಿದೆ. ಆದರೆ ಕನ್ನಡ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯವನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ಉನ್ನತ ಗುರಿ ಸಾಧಿಸುವುದಕ್ಕೆ ಸಾಧ್ಯವಿದೆ. ಈಗಾಗಲೇ  ಸಾಧಿಸಿ ಹಲವಾರು ಅಭ್ಯರ್ಥಿಗಳು ಅಧಿಕಾರಿಗಳಾಗಿರುವ ನಿದರ್ಶನಗಳು ನಮ್ಮ ಮುಂದಿವೆ. ಹಾಗೆಯೇ ಐಚ್ಚಿಕ ಕನ್ನಡ ಸಾಹಿತ್ಯವನ್ನು ತೆಗೆದುಕೊಂಡು ಉತ್ತೀರ್ಣರಾಗುತ್ತಿರುವ ಕನ್ನಡದ ಕಣ್ಮಣಿಗಳ  ಸಂಖ್ಯೆಯೂ ಪ್ರತಿವರ್ಷವೂ ಬೆಳೆಯುತ್ತಲೇ ಇದೆ.

ಯುಪಿಎಸ್‌ಸಿ ಯ ನಾಗರಿಕ ಸೇವಾ ಪರೀಕ್ಷೆಯ ಮುಖ್ಯ ಪರೀಕ್ಷೆಯಲ್ಲಿ ಐಚ್ಚಿಕ ವಿಷಯಗಳ ಪಾತ್ರವು ಬಹುಮುಖ್ಯವಾಗಿ ಕಾರ್ಯನಿರ್ವಹಿಸುತ್ತದೆ. ಇತರೆ ಸಾಮಾನ್ಯ ಪತ್ರಿಕೆಗಳಿಗಿಂತಲ್ಲೂ ಗರಿಷ್ಠವಾದ ಅಂಕಗಳನ್ನು ಗಳಿಸುವ ಸಾಧ್ಯತೆಯು ಇದರಲ್ಲಿde. ಹಾಗಾಗಿ ಇದರಿಂದಲ್ಲೆ ಐಎಎಸ್‌, ಐಪಿಎಸ್‌, ಐಆರ್‌ಎಸ್ ಎಂಬ ಸೇವೆಗಳು ಪಡೆಯುವ ಸಾಧನವಾಗುತ್ತದೆ ಎಂದೇ ಹೇಳಬಹುದು.

ಕನ್ನಡ ಸಾಹಿತ್ಯವನ್ನು ಐಚ್ಚಿಕ ವಿಷಯವಾಗಿ ತೆಗೆದುಕೊಂಡು ʼಯುಪಿಎಸ್‌ಸಿʼ ಯ ಮುಖ್ಯಪರೀಕ್ಷೆಯಲ್ಲಿ ಗರಿಷ್ಠವಾದ ಅಂಕಗಳನ್ನು ಪಡೆದು ಉತ್ತೀರ್ಣರಾದವರೆಲ್ಲಾ ಕನ್ನಡದಲ್ಲಿ ಎಂ. ಎ ಪದವಿಯನ್ನು ಪಡೆದವರಲ್ಲಾ, ಇದರಲ್ಲಿ ಹೆಚ್ಚಾಗಿ ಬಿ.ಇ ಪದವಿಧರರೇ ಎಂದರು ತಪ್ಪಾಗಲಾರದು. ಪ್ರಾಥಮಿಕ ಹಂತದಲ್ಲಿ ಕನ್ನಡ  ಓದು ಬರಹವನ್ನು ಕಲಿತು ಹೆಚ್ಚಿನ ವಿದ್ಯಾಭ್ಯಾಸವನ್ನು ಆಂಗ್ಲದಲ್ಲಿಯೇ ಮಾಡಿರುವರು.

ವಿಜಯಲಕ್ಷ್ಮಿ ಬಿದರಿ(2001) ರಲ್ಲಿ ಅವರು ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಕರ್ನಾಟಕದ ಮೊದಲ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದವರು. ದಕ್ಷಿಣ ಭಾರತದ ಮೊದಲ ಮಹಿಳೆ ಕೂಡ ಇವರೆ ಎಂದು ಹೇಳಬಹುದು. ತಮ್ಮ ಹತ್ತನೇ ತರಗತಿಯಲ್ಲಿ ಗಣಿತದ ವಿಷಯದಲ್ಲಿ 100/100 ಅಂಕಗಳನ್ನು ಪಡೆದವರು. ಉನ್ನತ ಶಿಕ್ಷಣವನ್ನು ವಿಜ್ಞಾನದಲ್ಲಿಯೇ ಮುಗಿಸಿದರು, ʻಯುಪಿಎಸ್‌ಸಿʼಯ ನಾಗರಿಕ ಸೇವಾ ಪರೀಕ್ಷೆಗಾಗಿ ಮಾರ್ಗದರ್ಶಕರು ಉತ್ತಮವಾದ ಮಾರ್ಗದರ್ಶನ ಮತ್ತು ವಾತಾವರಣ ನಮ್ಮ ನೆಲೆದಲ್ಲಿಯೇ ಕನ್ನಡದ ಮಣ್ಣಲ್ಲಿಯೇ ಇದೆ ಎಂದು ಅರಿತು ಕನ್ನಡ ಸಾಹಿತ್ಯವನ್ನು ಐಚ್ಚಿಕ ವಿಷಯವಾಗಿ ತೆಗೆದುಕೊಂಡು ಮೊದಲ ರ‍್ಯಾಂಕ್‌ ಪಡೆದು ಕನ್ನಡ ನಾಡು-ನುಡಿಯ ಕಹಳೆಯನ್ನು ಮೊಳಗಿಸಿದರು.

ತದನಂತರ ಅವರ ಹಾದಿಯಲ್ಲಿಯೇ ಬಂದಂತಹ  ಡಿ. ಕೆ. ಬಾಲಾಜಿ(2015) ಅವರು 311/500, ನಂದಿನಿ ಕೆ. ಆರ್(2016) ಅವರು‌ 331/500 ತೆಗೆದುಕೊಂಡು ಮೊದಲ ರ‍್ಯಾಂಕ್‌ ನ್ನು ಪಡೆದರು, ನಿಖಿಲ್‌ ಬಿ ಅವರು 305/500 ಹೀಗೆ ಮುಖ್ಯ ಪರೀಕ್ಷೆಯಲ್ಲಿ ಐಚ್ಚಿಕ ಕನ್ನಡ ಸಾಹಿತ್ಯವನ್ನು ತೆಗೆದುಕೊಂಡು  ಗರಿಷ್ಠವಾದ ಅಂಕಗಳನ್ನು ಗಳಿಸಿ ಐಎಎಸ್‌, ಐಪಿಎಸ್‌, ಐಆರ್‌ಎಸ್ ಸೇವೆಯನ್ನು ಪಡೆದವರ ಈ ಪಟ್ಟಿ ಮುಂದುವರೆಯುತ್ತಲ್ಲೇ ಇದೆ…

ಪ್ರಸ್ತುತ ಸಹ ಐಚ್ಚಿಕ ಕನ್ನಡ ಸಾಹಿತ್ಯದ ಬೇಡಿಕೆಯೂ  ಹೆಚ್ಚಾಗಲೂ ಕಾರಣವೇ ಪ್ರತಿ ವರ್ಷವೂ ಬರುತ್ತಿರುವ ಫಲಿತಾಂಶವೇ ಎಂದು ಹೇಳಬಹುದು. ಉತ್ತಮ ರೀತಿಯ ಮಾರ್ಗದರ್ಶನ ಮತ್ತು ಅಭ್ಯರ್ಥಿಗಳ ಪರಿಶ್ರಮದಿಂದ ಮುಂದಿನ ದಿನಗಳಲ್ಲಿ ಹಳೆ ಬೇರು ಹೊಸ ಚಿಗುರು ಎಂಬಂತೆ  ಮತ್ತೆ ಚರಿತ್ರೆಯನ್ನು  ಸೃಷ್ಟಿಸುವ ಸಾಮಾರ್ಥ್ಯ ಕನ್ನಡ ಸಾಹಿತ್ಯಕ್ಕಿದೆ. ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯದಲ್ಲಿ ಎಂದು ʻಯುಪಿಎಸ್‌ಸಿʼ ಯಲ್ಲಿ  ಕರ್ನಾಟಕಕ್ಕೆ  ಮೊದಲ ರ‍್ಯಾಂಕ್‌ ಐಚ್ಚಿಕ ಕನ್ನಡ ಸಾಹಿತ್ಯದಲ್ಲಿಯೇ ನಾವು ನಿರೀಕ್ಷೆ ಮಾಡಬಹುದು.

Leave a Comment

Your email address will not be published. Required fields are marked *

Scroll to Top

Discover more from Primus Civil Services Academy

Subscribe now to keep reading and get access to the full archive.

Continue reading