ಐಚ್ಚಿಕ ಕನ್ನಡ ಸಾಹಿತ್ಯದ ಪಠ್ಯಕ್ರಮ
ಐಚ್ಚಿಕ ಕನ್ನಡ ಸಾಹಿತ್ಯ ಪತ್ರಿಕೆ - 1
ವಿಭಾಗ - ಎ
ಅ) ಕನ್ನಡ ಭಾಷೆಯ ಚರಿತ್ರೆ
- ಭಾಷೆ ಎಂದರೇನು?
- ಭಾಷೆಯ ವರ್ಗೀಕರಣ
- ಭಾಷೆಯ ಸಾಮಾನ್ಯ ಲಕ್ಷಣಗಳು
- ದ್ರಾವಿಡ ಭಾಷಾ ಕುಟುಂಬ ಮತ್ತು ಅದರ ಸಾಮಾನ್ಯ ಲಕ್ಷಣಗಳು
- ಕನ್ನಡ ಭಾಷೆಯ ಪ್ರಾಚೀನತೆ
- ಕನ್ನಡ ಭಾಷೆಯ ಬೆಳವಣಿಗೆಯ ವಿವಿಧ ಹಂತಗಳು
- ಕನ್ನಡ ಭಾಷೆಯ ಉಪಭಾಷೆಗಳು
- ಕನ್ನಡದ ಪ್ರಾದೇಶಿಕ ಮತ್ತು ಸಾಮಾಜಿಕ ಭಾಷೆ
- ಕನ್ನಡದ ಮೇಲೆ ಇತರ ಭಾಷೆಗಳ ಪ್ರಭಾವ
- ಭಾಷಾ ಸ್ವೀಕರಣ
- ಕನ್ನಡ ಭಾಷೆಯಲ್ಲಿ ಧ್ವನಿವೈಶಿಷ್ಟ್ಯ ಮತ್ತು ಅರ್ಥಸಂಬಂಧಿ ಬದಲಾವಣೆಗಳು
ಬಿ) ಕನ್ನಡ ಸಾಹಿತ್ಯದ ಚರಿತ್ರೆ:
- ಪ್ರಾಚೀನ ಕನ್ನಡ ಸಾಹಿತ್ಯ: ಪ್ರಭಾವ ಮತ್ತು ಬೆಳವಣಿಗೆಯೊಂದಿಗೆ ಪಂಪನಿಂದ ರತ್ನಾಕರವರ್ಣಿವರೆಗೆ ವಿಮರ್ಶಾತ್ಮಕವಾಗಿ ಅಧ್ಯಯನ ಮಾಡುವುದು. ಪಂಪ, ಜನ್ನ ಮತ್ತು ನಾಗಚಂದ್ರ ಅವರ ಕವಿಗಳ ಅಧ್ಯಯನ
- ನಡುಗನ್ನಡ ಸಾಹಿತ್ಯ: ಪ್ರಭಾವ ಮತ್ತು ಪ್ರವೃತ್ತಿಗಳು.
- ವಚನ ಸಾಹಿತ್ಯ: ಬಸವಣ್ಣ, ಅಕ್ಕ ಮಹಾದೇವಿ.
- ನಡುಗನ್ನಡ ಸಾಹಿತ್ಯದ ಕವಿಗಳು: ಹರಿಹರ, ರಾಘವಾಂಕ, ಕುಮಾರವ್ಯಾಸ.
- ದಾಸ ಸಾಹಿತ್ಯ: ಪುರಂದರದಾಸರು ಮತ್ತು ಕನಕದಾಸರು.
- ಸಾಂಗತ್ಯ: ರತ್ನಾಕರವರ್ಣಿ.
ಸಿ) ಆಧುನಿಕ ಕನ್ನಡ ಸಾಹಿತ್ಯ
- ಪ್ರಭಾವ, ಪ್ರವೃತ್ತಿಗಳು ಮತ್ತು ಚಿಂತನೆಗಳು, ನವೋದಯ, ಪ್ರಗತಿಶೀಲ, ನವ್ಯ, ದಲಿತ ಮತ್ತು ಬಂಡಾಯ.
ವಿಭಾಗ -ಬಿ
ಅ) ಕಾವ್ಯ ಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ
ಕಾವ್ಯದ ವ್ಯಾಖ್ಯಾನ ಮತ್ತು ಗುರಿಗಳು: ಕಾವ್ಯ ಪಂಥಗಳ ಪ್ರತಿಪಾದನೆಯ ನಿರೂಪಣೆ.
ಅಲಂಕಾರ, ರೀತಿ, ವಕ್ರೋಕ್ತಿ, ರಸ, ಧ್ವನಿ, ಔಚಿತ್ಯ, ಭರತನ ರಸಸೂತ್ರಗಳ ಕುರಿತ ಚರ್ಚೆ.
ಆಧುನಿಕ ಸಾಹಿತ್ಯ ವಿಮರ್ಶೆಯ ಧೋರಣೆಗಳು: ರಾಚನಿಕ, ಐತಿಹಾಸಿಕ, ಮಾರ್ಕ್ಸವಾದ, ಸ್ತ್ರೀವಾದ, ವಸಾಹತೋತ್ತರ
ಬಿ) ಕರ್ನಾಟಕದ ಸಾಂಸ್ಕೃತಿಕ ಇತಿಹಾಸ
ಸಾಹಿತ್ಯದ ಹಿನ್ನಲೆಯಲ್ಲಿ ಕರ್ನಾಟಕ ಸಂಸ್ಕೃತಿಗೆ ಕರ್ನಾಟಕದ ರಾಜಮನೆತನಗಳ ಕೊಡುಗೆಗಳು:
ಬಾದಾಮಿ ಮತ್ತು ಕಲ್ಯಾಣಿಯ ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರ ಅರಸರು
ಕರ್ನಾಟಕದ ಪ್ರಮುಖ ಧರ್ಮಗಳು ಮತ್ತು ಅವುಗಳ ಸಾಂಸ್ಕೃತಿಕ ಕೊಡುಗೆ.
ಕರ್ನಾಟಕದ ಕಲೆಗಳು: ಶಿಲ್ಪಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಸಂಗೀತ, ನೃತ್ಯ.
ಕರ್ನಾಟಕ ಏಕೀಕರಣ ಮತ್ತು ಅದರ ಕನ್ನಡ ಸಾಹಿತ್ಯದ ಮೇಲೆ ಬೀರಿದ ಪರಿಣಾಮ.
ಐಚ್ಚಿಕ ಕನ್ನಡ ಸಾಹಿತ್ಯ ಪತ್ರಿಕೆ - 2
ವಿಭಾಗ - ಎ
ಅ) ಹಳೆಗನ್ನಡ ಸಾಹಿತ್ಯ ಚರಿತ್ರೆ
- ಪಂಪನ ವಿಕ್ರಮಾರ್ಜುನ ವಿಜಯ ( 12 ಮತ್ತು 13ನೇ ಆಶ್ವಾಸ)
- ವಡ್ಡಾರಾಧನೆ (ಸುಕುಮಾರಸ್ವಾಮಿಯ ಕಥೆ, ವಿದ್ಯುತ್ಚೋರ ರಿಸಿಯ ಕಥೆ)
ಬಿ) ನಡುಗನ್ನಡ ಸಾಹಿತ್ಯ ಚರಿತ್ರೆ
- ವಚನ ಕಮ್ಮಟ — ಸಂ. ಕೆ. ಮರಳಸಿದ್ದಪ್ಪ, ಕೀರಂ. ನಾಗರಾಜ್
- ಜನಪ್ರಿಯ ಕನಕಸಂಪುಟ — ಸಂ. ದೇ. ಜವರೇಗೌಡ
- ನಂಬಿಯಣ್ಣನ ರಗಳೆಗಳು — ಸಂ. ತೀ.ನಂ. ಶ್ರೀಕಂಠಯ್ಯ
- ಕುಮಾರವ್ಯಾಸ ಭಾರತ — ಕರ್ಣಪರ್ವ
- ಭರತೇಶ ವೈಭವ ಸಂಗ್ರಹ— ರತ್ನಾಕರವರ್ಣಿ ( ಸಂ. ತ. ಸು. ಶಾಮರಾವ್)
ವಿಭಾಗ- ಬಿ
ಅ) ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ
- ಕಾವ್ಯ: ಹೊಸಕನ್ನಡ ಕವಿತೆ — ಸಂ. ಜಿ.ಹೆಚ್. ನಾಯಕ್
- ಕಾದಂಬರಿಗಳು: ಬೆಟ್ಟದ ಜೀವ—ಶಿವರಾಮ ಕಾರಂತ, ಮಾಧವಿ—ಅನುಪಮ ನಿರಂಜನ, ಒಡಲಾಳ —ದೇವನೂರು ಮಹಾದೇವ
- ಕಥೆ: ಕನ್ನಡ ಸಣ್ಣಕತೆಗಳು — ಸಂ. ಜಿ.ಹೆಚ್. ನಾಯಕ್
- ನಾಟಕಗಳು: ಶೂದ್ರ ತಪಸ್ವಿ —ಕುವೆಂಪು ಮತ್ತು ತುಘಲಕ್—ಗಿರೀಶ್ ಕಾರ್ನಾಡ್
- ವಿಚಾರ ಸಾಹಿತ್ಯ: ದೇವರು —ಎ.ಎನ್. ಮೂರ್ತಿ ರಾವ್
ಬಿ) ಜನಪದ ಸಾಹಿತ್ಯ
- ಜಾನಪದ ಸ್ವರೂಪ — ಡಾ. ಎಚ್.ಎಂ. ನಾಯಕ್
- ಜನಪದ ಗೀತಾಂಜಲಿ — ಸಂ. ದೇ. ಜವರೇಗೌಡ
- ಕನ್ನಡ ಜನಪದ ಕಥೆಗಳು — ಸಂ. ಜಿ.ಶಂ. ಪರಮೇಶ್ವರಯ್ಯ
- ಬೀದಿ ಮಕ್ಕಳು ಬೆಳೆದೊ — ಸಂ. ಕಾಳೇಗೌಡ ನಾಗವಾರ
- ಕನ್ನಡ ಸಾವಿರದ ಒಗಟುಗಳು — ಸಂ. ಎಸ್.ಜಿ. ಇಮ್ರಾಪುರ