'ಬಾರಿಸು ಕನ್ನಡ ಡಿಂಡಿಮವ'
ದೇಶದ ಪ್ರತಿಷ್ಠಿತ ಪರೀಕ್ಷೆ ಎಂದೇ ಹೆಸರಾಗಿರುವ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗಳನ್ನು ಬರೆದು ಉನ್ನತ ಹುದ್ದೆಯನ್ನು ಅಲಂಕರಿಸಬೇಕು ಎಂಬುದು ಹಲವರ ಕನಸು. ಕರ್ನಾಟಕದ ಕನ್ನಡ ವಿದ್ಯಾರ್ಥಿಗಳಿಗೆ ಅವಕಾಶಗಳು ಕಡಿಮೆ, ಉತ್ತೀರ್ಣರಾಗುವವರ ಸಂಖ್ಯೆಯೂ ಕಡಿಮೆ ಎನ್ನುವ ಮಾತಿದೆ. ಆದರೆ ಕನ್ನಡ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯವನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ಉನ್ನತ ಗುರಿ ಸಾಧಿಸುವುದಕ್ಕೆ ಸಾಧ್ಯವಿದೆ. ಈಗಾಗಲೇ ಸಾಧಿಸಿ ಅಧಿಕಾರಿಗಳಾಗಿರುವ ಹಲವಾರು ಅಭ್ಯರ್ಥಿಗಳ ನಿದರ್ಶನಗಳು ನಮ್ಮ ಮುಂದಿವೆ. ಹಾಗೆಯೇ ಐಚ್ಚಿಕ ಕನ್ನಡ ಸಾಹಿತ್ಯವನ್ನು ತೆಗೆದುಕೊಂಡು ಉತ್ತೀರ್ಣರಾಗುತ್ತಿರುವ ಕನ್ನಡದ ಕಣ್ಮಣಿಗಳ ಸಂಖ್ಯೆಯೂ ಪ್ರತಿವರ್ಷವೂ ಬೆಳೆಯುತ್ತಲೇ ಇದೆ.
ಯುಪಿಎಸ್‌ಸಿ ಯ ನಾಗರಿಕ ಸೇವಾ ಪರೀಕ್ಷೆಯ ಮುಖ್ಯ ಪರೀಕ್ಷೆಯಲ್ಲಿ ಐಚ್ಚಿಕ ವಿಷಯಗಳ ಪಾತ್ರವು ಬಹುಮುಖ್ಯವಾಗಿ ಕಾರ್ಯನಿರ್ವಹಿಸುತ್ತದೆ. ಇತರೆ ಸಾಮಾನ್ಯ ಪತ್ರಿಕೆಗಳಿಗಿಂತಲ್ಲೂ ಗರಿಷ್ಠವಾದ ಅಂಕಗಳನ್ನು ಗಳಿಸುವ ಸಾಧ್ಯತೆಯು ಇದರಲ್ಲಿದೆ. ಹಾಗಾಗಿ ಇದರಿಂದಲ್ಲೆ ಐಎಎಸ್, ಐಪಿಎಸ್, ಐಆರ್‌ಎಸ್ ಎಂಬ ಸೇವೆಗಳು ಪಡೆಯುವ ಸಾಧನವಾಗುತ್ತದೆ ಎಂದೇ ಹೇಳಬಹುದು.
ಕನ್ನಡ ಸಾಹಿತ್ಯವನ್ನು ಐಚ್ಚಿಕ ವಿಷಯವಾಗಿ ತೆಗೆದುಕೊಂಡು ʼಯುಪಿಎಸ್‌ಸಿʼ ಯ ಮುಖ್ಯಪರೀಕ್ಷೆಯಲ್ಲಿ ಗರಿಷ್ಠವಾದ ಅಂಕಗಳನ್ನು ಪಡೆದು ಉತ್ತೀರ್ಣರಾದವರೆಲ್ಲಾ ಕನ್ನಡದಲ್ಲಿ ಎಂ. ಎ ಪದವಿಯನ್ನು ಪಡೆದವರಲ್ಲಾ, ಇದರಲ್ಲಿ ಹೆಚ್ಚಾಗಿ ಬಿ.ಇ ಪದವಿಧರರೇ ಎಂದರು ತಪ್ಪಾಗಲಾರದು. ಪ್ರಾಥಮಿಕ ಹಂತದಲ್ಲಿ ಕನ್ನಡ ಓದು ಬರಹವನ್ನು ಕಲಿತು ಹೆಚ್ಚಿನ ವಿದ್ಯಾಭ್ಯಾಸವನ್ನು ಆಂಗ್ಲದಲ್ಲಿಯೇ ಮಾಡಿರುವರು.
ವಿಜಯಲಕ್ಷ್ಮಿ ಬಿದರಿ(2001) ರಲ್ಲಿ ಅವರು ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಕರ್ನಾಟಕದ ಮೊದಲ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದವರು. ದಕ್ಷಿಣ ಭಾರತದ ಮೊದಲ ಮಹಿಳೆ ಕೂಡ ಇವರೆ ಎಂದು ಹೇಳಬಹುದು. ತಮ್ಮ ಹತ್ತನೇ ತರಗತಿಯಲ್ಲಿ ಗಣಿತದ ವಿಷಯದಲ್ಲಿ 100/100 ಅಂಕಗಳನ್ನು ಪಡೆದವರು. ಉನ್ನತ ಶಿಕ್ಷಣವನ್ನು ವಿಜ್ಞಾನದಲ್ಲಿಯೇ ಮುಗಿಸಿದರು, ʻಯುಪಿಎಸ್‌ಸಿʼಯ ನಾಗರಿಕ ಸೇವಾ ಪರೀಕ್ಷೆಗಾಗಿ ಮಾರ್ಗದರ್ಶಕರು ಉತ್ತಮವಾದ ಮಾರ್ಗದರ್ಶನ ಮತ್ತು ವಾತಾವರಣ ನಮ್ಮ ನೆಲೆದಲ್ಲಿಯೇ ಕನ್ನಡದ ಮಣ್ಣಲ್ಲಿಯೇ ಇದೆ ಎಂದು ಅರಿತು ಕನ್ನಡ ಸಾಹಿತ್ಯವನ್ನು ಐಚ್ಚಿಕ ವಿಷಯವಾಗಿ ತೆಗೆದುಕೊಂಡು ಮೊದಲ ರ‍್ಯಾಂಕ್ ಪಡೆದು ಕನ್ನಡ ನಾಡು-ನುಡಿಯ ಕಹಳೆಯನ್ನು ಮೊಳಗಿಸಿದರು.
ತದನಂತರ ಅವರ ಹಾದಿಯಲ್ಲಿಯೇ ಬಂದಂತಹ ಡಿ. ಕೆ. ಬಾಲಾಜಿ(2015) ಅವರು 311/500, ನಂದಿನಿ ಕೆ. ಆರ್(2016) ಅವರು 331/500 ತೆಗೆದುಕೊಂಡು ಮೊದಲ ರ‍್ಯಾಂಕ್ ನ್ನು ಪಡೆದರು, ನಿಖಿಲ್ ಬಿ ಅವರು 305/500 ಹೀಗೆ ಮುಖ್ಯ ಪರೀಕ್ಷೆಯಲ್ಲಿ ಐಚ್ಚಿಕ ಕನ್ನಡ ಸಾಹಿತ್ಯವನ್ನು ತೆಗೆದುಕೊಂಡು ಗರಿಷ್ಠವಾದ ಅಂಕಗಳನ್ನು ಗಳಿಸಿ ಐಎಎಸ್, ಐಪಿಎಸ್, ಐಆರ್‌ಎಸ್ ಸೇವೆಯನ್ನು ಪಡೆದವರ ಈ ಪಟ್ಟಿ ಮುಂದುವರೆಯುತ್ತಲ್ಲೇ ಇದೆ…
ಈಗ ನಿಮ್ಮಲ್ಲಿ ಪ್ರಶ್ನೆಯೊಂದು ಕಾಡುತ್ತಿರಬಹುದು, ಗರಿಷ್ಠವಾದ ಅಂಕಗಳು ಬಂದಿರುವ ನಿದರ್ಶನಗಳು ನಾವು ಈಗಾಗಲೇ ನೋಡಿದ್ದೇವೆ ಆದರೆ ಕೆಲವು ವರ್ಷಗಳಿಂದ ಕನ್ನಡ ಸಾಹಿತ್ಯದಲ್ಲಿ ಯಾಕೆ? ದಾಖಲೆ ಮಟ್ಟದ ಅಂಕಗಳು ಬರುತ್ತಿಲ್ಲ, ಇದಕ್ಕೆ ಕಾರಣಗಳೇನು? ಏನಿರಬಹುದು. ಅದಕ್ಕೆಲ್ಲಾ ಉತ್ತರ ಇಲ್ಲಿದೆ.
ಪದವಿ ಮತ್ತು ಉನ್ನತ ಪದವಿ ಮಟ್ಟದ ಕನ್ನಡ ಸಾಹಿತ್ಯದ ಪಠ್ಯಕ್ರಮವನ್ನು ಆಯ್ದುಕೊಂಡಿರುವ ನಾವು, ನಮ್ಮನ್ನೇ ಪ್ರಶ್ನೆ ಮಾಡಿಕೊಳ್ಳಬೇಕಿರುವ ಅಗತ್ಯವಿದೆ. ಯಾಕೆಂದರೆ ಎಷ್ಟರಮಟ್ಟಿಗೆ ನಮ್ಮ ತಯಾರಿವಿದೆ ಎಂದು. ಬರವಣಿಯಲ್ಲಿ ವೇಗ, ಪದಗಳ ಪ್ರಯೋಗ, ವಿಷಯದಲ್ಲಿನ ಅರ್ಥವಂತಿಕೆ ತೌಲನಿಕ ಅಧ್ಯಯನದ ವ್ಯಾಪ್ತಿ ಇವೆಲ್ಲವೂ ನಮ್ಮ ಉತ್ತರದಲ್ಲಿ ಪ್ರಸ್ತುತ ಪಡಿಸಲು ಆಗುತ್ತಿದೆಯೇ. ನಮ್ಮ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನವನ್ನು ಮಾಡುವವರು ಯಾರು? ಅವರ ನಿರೀಕ್ಷೆಗಳಿಗೆ ನಾವು ತಲುಪುತ್ತಿದ್ದೇವಾ, ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯದ ಕನ್ನಡದಲ್ಲಿ ಎಂ. ಎ ಪದವಿಯನ್ನು ಪಡೆಯುತ್ತೀರುವ ವಿದ್ಯಾರ್ಥಿಗಳ ಉತ್ತರಗಳೊಂದಿಗೆ ನಿಮ್ಮ ಉತ್ತರಗಳನ್ನು ಸಮೀಕರಿಸಿ ನೋಡಿದ್ದಿರಾ?…ನೋಡಿದರೆ ಅವರಕ್ಕಿಂತ ಎಷ್ಟರಮಟ್ಟಿಗೆ ನಮ್ಮ ಉತ್ತರಗಳು ಮೇಲುಗೈಯನ್ನು ಸಾಧಿಸುತ್ತವೆ.
ಇವೆಲ್ಲವನ್ನು ನಾವು ವಿವೇಚನೆಗೆ ಒಳಪಡಿಸಿಕೊಳ್ಳಬೇಕಾಗುತ್ತದೆ. ಯಾಕೆಂದರೆ ನಮ್ಮ ಉತ್ತರಗಳನ್ನು ಮೌಲ್ಯಮಾಪನವನ್ನು ಮಾಡುವವರು ಕನ್ನಡದ ಪ್ರಾಧ್ಯಾಪಕರೇ ಆಗಿರುತ್ತಾರೆ. ಹಲವಾರು ವರ್ಷಗಳಿಂದ ಕನ್ನಡ ಸಾಹಿತ್ಯವನ್ನು ನೂರಾರು ಕೃತಿಗಳನ್ನು ತೌಲನಿಕವಾಗಿ ಸಂಶೋಧನೆಯ ಆಧಾರದ ಮೇಲೆ ವರ್ತಮಾನಕ್ಕೆ ಮುಖಾಮುಖಿಯಾಗಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಬೋಧಿಸುವವರ ಅಧ್ಯಯನದ ವ್ಯಾಪ್ತಿ ಅಗಾಧವಾಗಿರುತ್ತೆ.
ಉದಾ: ಪಂಪನ “ಪಂಪಭಾರತ” ವನ್ನು ಬೋಧಿಸುವ ಕನ್ನಡದ ಪ್ರಾಧ್ಯಾಪಕರು ಹಲವಾರು ಆಯಾಮಗಳಲ್ಲಿ ಆ ಕೃತಿಯನ್ನು ಓದಿರಬಹುದು ಪಂಪನ ಕಾವ್ಯದ ಕುರಿತಾಗಿ ಬಂದಿರುವ ನೂರಾರು ವಿಮರ್ಶಾ ಆಕರ ಗ್ರಂಥಗಳನ್ನು ಓದಿ ಸಂಪಾದಿಸುತ್ತಲೆ ಇರಬಹುದು ಹಾಗಾಗಿ ಆ ಕೃತಿಯನ್ನು ಹಲಾವಾರು ರೀತಿಯಲ್ಲಿ ವಿಮರ್ಶಿಸಿ ಕಾಲಕ್ಕೆ ತಕ್ಕಂತೆ ವರ್ತಮಾನಕ್ಕೆ ಮುಖಾಮುಖಿಯಾಗಿಸಿ ಅವರ ವಿದ್ಯಾರ್ಥಿಗಳಿಗೆ ಬೋಧನೆಯನ್ನು ಮಾಡುತ್ತಾ ಅವರ ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಎಚ್ಡಿ ಮಾರ್ಗದರ್ಶನವನ್ನು ನೀಡುತ್ತಿರುತ್ತಾರೆ ಹಾಗಾಗಿ ಹೊಸ ಆಯಾಮದಲ್ಲಿ ಒಂದು ಕೃತಿಯನ್ನು ವಾಸ್ತವಿಕತೆಯಲ್ಲಿ ಯಾವೆಲ್ಲಾ ದೃಷ್ಟಿಕೋನದಿಂದ ನೋಡಬೇಕು ಎಂಬುದನ್ನೆ ಉತ್ತರಗಳಲ್ಲಿ ನಿರೀಕ್ಷೆ ಮಾಡಿರುತ್ತಾರೆ.
ಕನ್ನಡ ಸಾಹಿತ್ಯದ ಪ್ರಾಧ್ಯಾಪಕರು ಮತ್ತೆ ನಾವು ವಿಶೇಷಜ್ಞರಾಗಿ ವಿಗಂಡಿಸಬಹುದು ಭಾಷಾಶಾಸ್ತ್ರ ಪ್ರಾಧ್ಯಾಪಕರು, ಜಾನಪದ ಪ್ರಾಧ್ಯಾಪಕರು, ಕನ್ನಡ ಸಾಹಿತ್ಯದ ಪ್ರಾಧ್ಯಾಪಕರು ಇತ್ಯಾದಿ… ಹೀಗಿರುವಾಗ ನಮ್ಮ ತಯಾರಿ ಮಟ್ಟವು ಸಹ ಅವರ ಬೇಡಿಕೆಗೆ ನಿಲುಕುವಂತೆ ಇದ್ದರೆ ಮಾತ್ರ ಕನ್ನಡ ಸಾಹಿತ್ಯದಲ್ಲಿ ೩೦೦+ ರ ಗಡಿಯನ್ನು ಸುಲಭವಾಗಿ ದಾಟಬಹುದು.
ಈ ಮೇಲಿನ ಅಂಶಗಳ ಆಧಾರದ ಮೇಲೆ ನಮ್ಮ ತಯಾರಿಯನ್ನು ನಾವು ಸಿದ್ಧಪಡಿಸಿಕೊಳ್ಳಬೇಕಿದೆ. ನಾವು ಎಲ್ಲಾದರೂ ಸಹ ತರಗತಿಗಳನ್ನು ತೆಗೆದುಕೊಂಡಾಗ ನಿಮಗೆ ಇವುಗಳನ್ನು ಪೂರೈಸುವಂತಹ ಬೋಧನೆ ಮತ್ತು ಮಾರ್ಗದರ್ಶನ ಲಭ್ಯವಾಗುತ್ತೀದಿಯಾ? ಎಂದು ವಿವೇಚಿಸಿ ಹಾಗೆಯೇ ಉತ್ತರಗಳನ್ನು ಬರೆಯುವಾಗ ವಿಶ್ವವಿದ್ಯಾಲಯದ ಅಧ್ಯಾಪಕರ ಬೇಡಿಕೆಯನ್ನು ಪೂರೈಸುವಂತಹ ಉತ್ತರಗಳು ನಮ್ಮದಾಗಿದ್ದೀಯಾ ಎಂದು ಯೋಚಿಸಿ ಅದರ ತಕ್ಕಂತೆ ತಯಾರಿಯನ್ನು ವೃದ್ಧಿ ಪಡಿಸಿಕೊಳ್ಳಬೇಕು.
ಇದಕ್ಕೆ ಏನಾದರೂ ಸಮಗ್ರವಾದ ಪರಿಹಾರ ನಿಮ್ಮಲ್ಲಿ ಇದೀಯಾ ಎಂದು ನೀವು ಕೇಳಿದರೆ. ಹೌದು, ಇದೆ. ನಾವು ಮಾಡಿದ “ಪರೀಕ್ಷಾ ಪರ್ವ” ದಲ್ಲಿ.
“ಪರೀಕ್ಷಾ ಪರ್ವ” ದಲ್ಲಿ ನಾವು ಉತ್ತರಗಳನ್ನು ರಚಿಸುವಾಗ ಬಹುಮುಖಿಯ ಆಯಾಮವನ್ನು ನೀಡಿದ್ದೇವೆ. ನಿರ್ದಿಷ್ಟವಾದ ಪ್ರಶ್ನೆಗೆ ನಿರ್ದಿಷ್ಟವಾದ ಉತ್ತರವನ್ನು ರಚಿಸುವುದು ಹೇಗೆ ಎಂಬುದನ್ನು, ಕಳೆದ ಹತ್ತು ವರ್ಷಗಳ ಪ್ರಶ್ನೆ ಪತ್ರಿಕೆಗಳ ಆಧಾರದ ವಿಶ್ಲೇಷಣೆ ಮಾಡಲಾಗಿದೆ. ವಿಷಯದ ಹೆಚ್ಚಿನ ಮೌಲ್ಯವರ್ಧನೆಗೆ ತೌಲನಿಕ ಅಧ್ಯಯನಕ್ಕೆ ಹೆಚ್ಚಿನ ಮಹತ್ವವನ್ನು ನೀಡಿ ಅವುಗಳನ್ನು ಯಾವ ರೀತಿಯಲ್ಲಿ ಉತ್ತರಗಳಲ್ಲಿ ಉಪಯೋಗಿಸಿಕೊಳ್ಳಬೇಕೆಂದು ಚರ್ಚೆ ಮಾಡಿದ್ದೇವೆ. ನಮ್ಮ ನೋಟ್ಸ್ ನಲ್ಲಿ ಉತ್ತರಗಳಿಗೆ ಪೂರಕವಾಗುವಂತಹ ಹಲವಾರು ಆಯಾಮಗಳ ಪ್ರತಿಯೊಂದು ಕೃತಿಯ ವಿಮರ್ಶೆಗಳು ಒಳಗೊಂಡಿವೆ.
ಉದಾ: ನಮ್ಮ ತರಗತಿಗಳಲ್ಲಿ ತುಘಲಕ್ ನಾಟಕವನ್ನು ಅಧ್ಯಯನ ಮಾಡುವಾಗ ಅಸಂಗತ ನಾಟಕಗಳ ಹಿನ್ನಲೆಯನ್ನು ನೀಡಿ, ಅಲ್ಬರ್ಟ್ ಕಮೂವಿನ ʼಕಾಲಿಗುಲʼ, ವಿಲಿಯಂ ಶೇಕ್ಸ್ಪಪಿಯರ್ ನ ʻಮ್ಯಾಕ್ ಬೆತ್ʼ, ಪಿ. ಲಂಕೇಶ್ ಅವರು ಅನುವಾದಿಸಿರುವ ʻದೊರೆ ಈಡಿಪಸ್ʼ, ಅಡಿಗ ರವರ ʻಭೂಮಿಗೀತʼ ಕವನ ಹೀಗೆ ಹಲವಾರು ಕೃತಿಗಳೊಂದಿಗೆ ತುಘಲಕ್ ನಾಟಕವನ್ನು ಸಮೀಕರಿಸಿ ವಿಶ್ಲೇಷಣೆ ಮಾಡಲಾಗಿದೆ. ಹೀಗೆ ಪ್ರತಿಯೊಂದು ಕೃತಿಯನ್ನು ಚರ್ಚಿಸಿ ಯಾಕೆ? ಈ ರೀತಿಯ ಓದು ಮತ್ತು ವಿಷಯ ಮುಖ್ಯವೆಂದು ನಮ್ಮ ಯುಪಿಎಸ್‌ಸಿ ಆಕಾಂಕ್ಷೀಗಳಿಗೆ ಮನದಟ್ಟು ಮಾಡಿಸಿ ಅದರ ಅನುಗುಣವಾಗಿ ನೋಟ್ಸ್ ನೀಡಲಾಗಿದೆ. ಅವೇ ಮುಂದಿನ ದಿನಗಳಲ್ಲಿ ಉತ್ತರಗಳನ್ನು ವೃದ್ಧಿಗೊಳಿಸಿ ಗರಿಷ್ಟವಾದ ಅಂಕಗಳನ್ನು ಪಡೆಯುವಂತೆ ಮಾಡುವ ಸಾಧನಗಳಾಗುತ್ತವೆ.
ಪರೀಕ್ಷಾ ಸರಣಿಯಲ್ಲಿ ಪ್ರತಿಯೊಂದು ಉತ್ತರವನ್ನು ಪ್ರಶ್ನೇಯ ಬೇಡಿಕೆಯ ತಕ್ಕಂತೆ ಪ್ರತಿ ವಾಕ್ಯವನ್ನು ಪರಿಶೀಲಿಸಿ ನೋಡಿ ಮಾರ್ಗದರ್ಶನವನ್ನು ನೀಡಲಾಗುತ್ತಿದೆ. ಈ ರೀತಿಯ ತಯಾರಿ ನಿಮ್ಮದಾಗಿದ್ದರೆ ಪದಗಳಲ್ಲಿ ಪ್ರಯೋಗ ಮಾಡಬಹುದು, ವಿಷಯದಲ್ಲಿ ಹಲವಾರು ಆಯಾಮಗಳ ಅರ್ಥವಂತಿಕೆ ಇರುತ್ತದೆ, ಅದನ್ನು ಪ್ರಸ್ತುತ ಪಡಿಸುವಾಗ ಆತ್ಮ ವಿಶ್ವಾಸವು ಇನ್ನಷ್ಟು ಹೆಚ್ಚಾಗುತ್ತದೆ, ಪ್ರತಿ ಪ್ರಶ್ನೆಗೂ ಈ ರೀತಿಯ ಸಿದ್ಧಿ ಮಾದರಿಯ ಉತ್ತರಗಳನ್ನು ಸಿದ್ಧಪಡಿಸಿಕೊಂಡು ತಯಾರಾದರೆ ಬರವಣಿಗೆಯ ವೇಗವನ್ನು ಸುಲಭವಾಗಿ ಹೆಚ್ಚಿಸಿಕೊಳ್ಳಬಹುದು.
ಈ ರೀತಿಯ ಉತ್ತಮ ಮಾರ್ಗದರ್ಶನ ಮತ್ತು ನಿಮ್ಮ ಪರಿಶ್ರಮದಿಂದ ಮತ್ತೆ ಮುಂದಿನ ದಿನಗಳಲ್ಲಿ ಹಳೆ ಬೇರು ಹೊಸ ಚಿಗುರು ಎಂಬಂತೆ ಮತ್ತೆ ಚರಿತ್ರೆಯನ್ನು ಸೃಷ್ಟಿಸುವ ಸಾಮಾರ್ಥ್ಯ ಕನ್ನಡ ಸಾಹಿತ್ಯಕ್ಕಿದೆ. ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯದಲ್ಲಿ ಎಂದು ʻಯುಪಿಎಸ್‌ಸಿʼ ಯಲ್ಲಿ ಕರ್ನಾಟಕಕ್ಕೆ ಮೊದಲ ರ‍್ಯಾಂಕ್ ಐಚ್ಚಿಕ ಕನ್ನಡ ಸಾಹಿತ್ಯದಲ್ಲಿಯೇ ನಾವು ನಿರೀಕ್ಷೆ ಮಾಡಬಹುದು ಹಾಗೆಯೇ ಹಲವಾರು ಅಭ್ಯರ್ಥಿಗಳು ಕನ್ನಡ ಸಾಹಿತ್ಯವನ್ನು ಆಯ್ದುಕೊಂಡೆ ಉನ್ನತ ಹುದ್ದೆಯನ್ನು ಅಲಂಕರಿಸಿ ಕನ್ನಡವನ್ನು ಅನ್ನದ ಭಾಷೆಯಾಗಿ ಪರಿವರ್ತಿಸಿ ಕನ್ನಡ ನಾಡಿನ ಕಹಳೆಯು ʻಕವಿರಾಜಮಾರ್ಗʼದಲ್ಲಿ “ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್ʼ ಗೆ ವ್ಯಾಪಿಸಿದರೆ ನಮ್ಮ ಇಂದಿನ ಕಹಳೆಯು “ಕಾಶ್ಮೀರದಿಂದ ಕನ್ಯಾಕುಮಾರಿ”ವರೆಗೂ ವ್ಯಾಪಿಸಲಿ ಕನ್ನಡಿಗರು ಆಡಳಿತವನ್ನು ನಡೆಸುವಂತಾಗಲಿ”
Related
Discover more from Primus Civil Services Academy
Subscribe to get the latest posts sent to your email.
