Primus Civil Services Academy

Home / Updates / Kannada Optional ವಿಷಯದ ಮಾರ್ಗದರ್ಶನ ಆಯ್ಕೆ ಮಾಡುವಾಗ ಮಾಡುವ ತಪ್ಪುಗಳು
Operation Sindoor - Primus IAS
Current affairs

Operation Sindoor

July 21st Current Affairs Home / Operation Sindoor Why in News? Parliament’s Monsoon Session, starting July 21, 2025, is expected to feature

Read More »
Sesismic Waves - Primus IAS
Current affairs

Alaska Earthquakes

July 21st Current Affairs Home / Alaska Earthquakes Why in News? On July 21, 2025, Alaska Peninsula was struck by

Read More »

Kannada Optional ವಿಷಯದ ಮಾರ್ಗದರ್ಶನ ಆಯ್ಕೆ ಮಾಡುವಾಗ ಮಾಡುವ ತಪ್ಪುಗಳು

  1. ಮೂರ್ಖತನದ ಪರಮಾವಧಿ: ತಮಗೆ ಪಾಠ ಮಾಡುವವರು ಎಷ್ಟು ಅಂಕ ಗಳಿಸಿದ್ದಾರೆ, ಅವರಿಂದ ಎಷ್ಟು ಜನ ಟಾಪರ್ ಗಳಾಗಿ ಹೊರಹೊಮ್ಮಿದ್ದಾರೆ – ಇವುಗಳನ್ನು ತಿಳಿಯದೆ, ಬ್ರಾಂಡ್ ವ್ಯಾಲ್ಯೂ ಆಧಾರದ ಮೇಲೆ ತರಗತಿಗಳಿಗೆ ಹೋಗುವುದು.
  2. ತಪ್ಪು ನಿರ್ಧಾರ: ಗುರುಗಳು ಸಾಹಿತ್ಯಿಕ ಹಿನ್ನೆಲೆ ಹೊಂದಿದ್ದಾರೆಯೇ, ಅವರಿಗೆ ವೈಯಕ್ತಿಕ ಮಾರ್ಗದರ್ಶನ ಮಾಡಲು ಆಸಕ್ತಿ, ಸಮಯ ಇದೆಯೇ – ಇವುಗಳನ್ನು ತಿಳಿದುಕೊಳ್ಳದೆ ಕೋರ್ಸ್ ತೆಗೆದುಕೊಳ್ಳುವುದು.
  3. ಹಣ ಉಳಿಸಲು, ಸಮಯ ಕಳೆದುಕೊಳ್ಳುವುದು: ಕೋರ್ಸ್ ಹೇಗೋ ತಗೊಂಡು ಆಗಿದೆ, ಹಣ ವಾಪಸ್ ಕೊಡೋಲ್ಲ. ಆದ್ದರಿಂದ ಅಲ್ಲೇ ಮುಂದುವರಿಸುವುದು. ಇದು ಅಪಾಯಕಾರಿ. ಇದರಿಂದ ನಿಮ್ಮ ಸಮಯ, ಪ್ರಯತ್ನ (ಅಟೆಂಪ್ಟ್), ಹಣ ವ್ಯರ್ಥ. ನಿಮ್ಮ ಹಿತೈಷಿಗಳ ಆಶೋತ್ತರಗಳು ಬೂದಿಯಾಗುತ್ತವೆ.
  4. ಹೊಸತನ, ಹೊಸ ಮಾರ್ಗದರ್ಶಕರು ಸಿಗದ ಕಾರಣ: ಹತ್ತು-ಹದಿನೈದು ವರ್ಷದ ಹಿಂದಿನ ನೋಟ್ಸ್ ಅನ್ನೇ ಬರೆಸುತ್ತಿರುವವರ ಬಳಿ ತರಗತಿಗಳನ್ನು ಕೇಳುವುದು.

ಸಿದ್ಧತೆ ಮಾಡುವಾಗ ಮಾಡುವ ದೊಡ್ಡ ತಪ್ಪುಗಳು

  1. ಕೇವಲ ನಾಲ್ಕು ತಿಂಗಳ ಕೋಚಿಂಗ್ ಸಾಕು.
  2. ಪಠ್ಯಕ್ರಮದ ಪುಸ್ತಕ, ತರಗತಿಗಳ ನೋಟ್ಸ್ ಮತ್ತು ಟಾಪರ್ ಗಳ ನೋಟ್ಸ್ ಓದಿದರೆ ಹೆಚ್ಚು ತಯಾರಿ ಆಗುತ್ತದೆ.
  3. ಅಂಕಗಳು ಎಷ್ಟಿದ್ದರೂ ಕಡಿಮೆ ಬರುತ್ತವೆ. ಕಡಿಮೆ ಪ್ರಯತ್ನ ಸಾಕು.
  4. ಪತ್ರಿಕೆ 1 ಕ್ಕೆ ಆ ಸರ್ ನೋಟ್ಸ್ ಬಹಳ ಜಾಸ್ತಿ ಇದೆ. ಅದನ್ನು ಓದಿದರೆ ಸಾಕು.
  5. ಪುನರಾವರ್ತಿತ ಪ್ರಶ್ನೆಗಳಿಗೆ ಉತ್ತಮ ನೋಟ್ಸ್ ತಯಾರಿ ಮಾಡಿಕೊಂಡರೆ ಮುಗಿಯಿತು.
  6. ಮಹಾಪಾಪ: ತರಗತಿಗಳು ಮುಗಿದ ನಂತರ ಲೈಬ್ರರಿ ಅಲ್ಲಿ ಕುಳಿತು ಎಲ್ಲಾ ನೋಟ್ಸ್ ಒಮ್ಮೆ ಓದಿದರೆ ಸಾಕು.
  7. ನಮ್ಮ ಪೂರ್ವಾಗ್ರಹ: ಪತ್ರಿಕೆ-1 ರಲ್ಲಿ ಪಠ್ಯಕ್ರಮದ ಒಳಗೆ ಪ್ರಶ್ನೆಗಳು ಬರುತ್ತವೆ ಎಂಬ ಕಲ್ಪನೆ.
  8. ಸೋಮಾರಿತನ: ದೊಡ್ಡ ಗಾತ್ರದ ಪುಸ್ತಕ ಎಂದು ತಿಪ್ಪೇರುದ್ರಸ್ವಾಮಿ ಅವರ ಕಾವ್ಯಮೀಮಾಂಸೆ, ಕರ್ನಾಟಕ ಸಾಂಸ್ಕೃತಿಕ ಇತಿಹಾಸಗಳನ್ನು ಓದದಿರುವುದು.
  9. Laziness: ಪಠ್ಯಕ್ರಮದ ಎಲ್ಲಾ ಪುಸ್ತಕಗಳನ್ನು ಓದದೆಯೇ ಇರುವುದು. (ಜಾನಪದ, ಸಾಂಸ್ಕೃತಿಕ ಇತಿಹಾಸಗಳನ್ನು ಉದಾಸೀನ ಮಾಡುವುದು.)
  10. ಸಮಗ್ರವಾಗಿ ಅರ್ಥೈಸಿಕೊಳ್ಳದ ಪರಿಣಾಮ: ಪತ್ರಿಕೆ 1 ರಲ್ಲಿ ವಿಷಯ ಸ್ಪಷ್ಟತೆ ಇಲ್ಲದಿರುವುದು. ಉದಾ: ಧ್ವನಿ ಎಂದರೆ ಸ್ವಂತ ಪದಗಳಲ್ಲಿ ಹೇಳುವ, ಬರೆಯುವ ಕೌಶಲ ಇಲ್ಲದಿರುವುದು.
  11. ತುಂಬಾ ಮೂಲಭೂತ ಪರಿಕಲ್ಪನೆಗಳಲ್ಲಿ ಸ್ಪಷ್ಟತೆ ಇರದಿರುವುದು, ಆಳವಾಗಿ ಅರ್ಥ ಮಾಡಿಕೊಳ್ಳದಿರುವುದು.. Eg: ಜಾನಪದ – ಜನಪದಕ್ಕೆ ವ್ಯತ್ಯಾಸ ತಿಳಿದಿಲ್ಲದಿರುವುದು.
  12. ಮೌಲ್ಯಮಾಪಕರ ಬೇಡಿಕೆ ಏನೆಂದು ತಿಳಿದು ಕೊಳ್ಳದಿರುವುದು: ಉತ್ತರದಲ್ಲಿ ಕೇವಲ ಕಥೆ ಬರೆಯುವುದು (ಹಳಗನ್ನಡ ಪ್ರಶ್ನೆಗಳಿಗೆ ಮಹಾಭಾರತ, ರಾಮಾಯಣ, ಇತ್ಯಾದಿ).

ತರಗತಿಗಳನ್ನು ಕೇಳುವಾಗ ಮಾಡುವ ತಪ್ಪುಗಳು

  1. ಶಾರ್ಟ್ ಕಟ್ ಎಂದು ಮಾಡುವ ತಪ್ಪು: ಹಿಂದೆ ಸಾಹಿತ್ಯ ಪಾಠ ಮಾಡುತ್ತಿದ್ದವರ ಆಡಿಯೋ ತರಗತಿ ಕೇಳಿ, ಅದರ ನೋಟ್ಸ್ ಮಾಡಿಕೊಂಡು ಅದನ್ನೇ ಪರೀಕ್ಷೆಯಲ್ಲಿ ಬರೆಯುವುದು.
  2. ಸ್ಮಾರ್ಟ್ ವರ್ಕ್ ಎಂದು ತಪ್ಪು ಹಾದಿಯಲ್ಲಿ ಪರಿಶ್ರಮ ಪಡುವುದು: ಯೂಟ್ಯೂಬ್ ನಲ್ಲಿ ಸಿಗುವ ವಿಡಿಯೋ ತರಗತಿಗಳನ್ನು ನೋಡಿ ನೋಟ್ಸ್ ಮಾಡಿಕೊಳ್ಳುವುದು. ಇವು ಯುಪಿಎಸ್ಸಿ ಎಕ್ಸಾಮ್ ಬೇಡಿಕೆಗೆ ತಕ್ಕಂತೆ ಇರುವುದಿಲ್ಲ.
  3. ಬಹುದೊಡ್ಡ ಮೂರ್ಖತನ: ಕನ್ನಡ ಸಾಹಿತ್ಯದಲ್ಲಿ 300ಕ್ಕೂ ಹೆಚ್ಚು ಅಂಕ ಬರುತ್ತಿದ್ದ ಸಮಯದಲ್ಲಿ 260ರ ಆಸುಪಾಸಿನ ಬಳಿ ಅಂಕ ಪಡೆದವರ ತರಗತಿಗಳನ್ನು ಕೇಳಿ, ಅವರ ಹತ್ತಿರ ಪರೀಕ್ಷಾ ಸರಣಿ ಬರೆಯುವುದು.
  4. ಸೀನಿಯರ್ಗಳನ್ನು ಮೂರ್ಖವಾಗಿ ನಂಬುವುದು: ಯಾವುದೋ telegram ಗುಂಪಿನಲ್ಲಿ ಆ ಸರ್ ನೋಟ್ಸ್ 1500 ಪುಟ ಇದೆ. ಅದನ್ನು ಓದಿದರೆ pHD ಮಾಡಿದಷ್ಟು ಎಂದು ಹಬ್ಬಿರುವ ಸುಳ್ಳು ನಂಬಿ ಅದನ್ನು ಓದದಿರುವುದು.
  5. ಏಕೆ ಕಷ್ಟ ಪಡಬೇಕು? ಎನ್ನುವ ಮನೋಭಾವ: ಪತ್ರಿಕೆ-2 ಕ್ಕೆ ಹೊಸ ವಿಮರ್ಶಾ ಪುಸ್ತಕಗಳಿಂದ ನೋಟ್ಸ್ ಮಾಡಿಕೊಳ್ಳದೆ, ಕೋಚಿಂಗ್ ನೋಟ್ಸ್ ವಿಮರ್ಶೆಯನ್ನೇ ಪರೀಕ್ಷೆಯಲ್ಲಿ ಬರೆಯುವುದು.
  6. ತರಗತಿ ಕೇಳುವಾಗ ಅನ್ಯ ಮನಸ್ಕನಾಗಿರುವುದು.

ಉತ್ತರ ಬರೆಯುವಾಗ ಮಾಡುವ ತಪ್ಪುಗಳು

  1. ಪ್ರತಿದಿನ ಉತ್ತರ ಬರವಣಿಗೆ ಬೇಡ.
  2. ಪ್ರತಿದಿನ ಉತ್ತರ ನಾನೇ ಬರೆದು, ನಾನೇ ಮೌಲ್ಯಮಾಪನ ಮಾಡಿಕೊಂಡರೆ ಸಾಕು.
  3. ಟಾಪರ್ ಗಳ ಮಾದರಿ ಉತ್ತರ ಓದಿದರೆ ಸಾಕು.
  4. ನಮ್ಮನ್ನು ನಾವೇ ಮಿತಿಗೆ ಒಳಪಡಿಸಿಕೊಳ್ಳುವುದು: ವೇಗವಾಗಿ ಕನ್ನಡವನ್ನು ಬರೆಯಲು ಯತ್ನಿಸದಿರುವುದು.
  5. ಸಮಯದ ಅಭಾವ: ಮುಖ್ಯ ಪರೀಕ್ಷೆಯಲ್ಲಿ ಉತ್ತರಿಸದೆ ಇರುವ Sheetಗಳನ್ನು ಹೊಡೆದು ಹಾಕದಿರುವುದು.
  6. ಮನನ ಮಾಡುವ ಶಕ್ತಿಯ ತಪ್ಪು ಬಳಕೆ: ಮಾದರಿ ಉತ್ತರ, ಯಶಸ್ವಿ ಉತ್ತರಗಳನ್ನು ಕಂಠಪಾಠ ಮಾಡುವುದು. ಅದನ್ನೇ ಪರೀಕ್ಷೆಯಲ್ಲಿ ಬರೆಯುವುದು ತಪ್ಪು.
  7. ಏಕೆ ರಿಸ್ಕ್ ತೆಗೆದುಕೊಳ್ಳಬೇಕು ಎಂಬ ಮನೋಭಾವ: ನಮ್ಮ ಸ್ವಂತ ಅಭಿಪ್ರಾಯ, ಅನಿಸಿಕೆಗಳನ್ನು ಉತ್ತರದಲ್ಲಿ ಬರೆಯದೆ, ಸರ್ ನೋಟ್ಸ್ ನಲ್ಲಿನ ಅಭಿಪ್ರಾಯ ಬರೆಯುವುದು.
  8. ಒಂದೇ ವಾದ, ಪಾಯಿಂಟ್ ಅನ್ನು ಬೇರೆ ಬೇರೆ ಪದಗಳಲ್ಲಿ ಬರೆಯುವುದು.
  9. ಒಂದೇ ಉದಾಹರಣೆಯನ್ನು ಇಡೀ ಪ್ರಶ್ನೆಯಲ್ಲಿ ಪುನರಾವರ್ತಿಸುವುದು.
  10. ಹೈಸ್ಕೂಲು ಮಟ್ಟದ ಭಾವಾರ್ಥ ಬರೆಯುವುದು. ಉತ್ತರ, ಪೀಠಿಕೆ, ವಿವರಣೆ, ಉಪಸಂಹಾರ ಎಂದು ಉತ್ತರ ಪತ್ರಿಕೆಯಲ್ಲಿ ಬರೆಯುವುದು.
  11. ಕನ್ನಡ ಉತ್ತರ ಪತ್ರಿಕೆಯಲ್ಲಿ ಪ್ರಸೆಂಟೇಷನ್ಗೆ ಗಮನ ಕೊಡದಿರುವುದು. ಪತ್ರಿಕೆ ಪೂರ್ಣ ಮಾಡಿದರೆ ಸಾಕಪ್ಪಾ ಎನ್ನುವ ಮನೋಭಾವ.
  12. ಇಪ್ಪತ್ತು ಅಂಕದ ಪ್ರಶ್ನೆಗಳಿಗೆ ಒಂದು ಸ್ಥೂಲ Framework ಇಲ್ಲದೆ ಉತ್ತರ ಬರೆಯುವುದು.
  13. ವೈವಿಧ್ಯ ಮೌಲ್ಯವರ್ಧಿತ ಅಂಶ ಸಂಗ್ರಹ ಮಾಡಿಕೊಳ್ಳದಿರುವುದು. ಅದನ್ನು ಬರೆಯದಿರುವುದು.
  14. ಒಂದು ಉತ್ತರಕ್ಕೆ ಅದರ ಬಹುಮುಖ್ಯ ವಿಚಾರ, ಭಾವ, ಪರಿಕಲ್ಪನೆ, ಸಂಕೀರ್ಣತೆ ಇವುಗಳನ್ನು ಸಮರ್ಪಕವಾಗಿ ಬರವಣಿಗೆಯಲ್ಲಿ ಅಭಿವ್ಯಕ್ತಿ ಮಾಡದಿರುವುದು.
  15. ಪುನರುಕ್ತಿ ಹೆಚ್ಚಾಗಿ ಮಾಡುವುದು: ಒಂದು ಉತ್ತರದಲ್ಲಿ ಬರೆದ ಪದವನ್ನೇ ಮತ್ತೆ ಮತ್ತೇ ಬರೆಯುವುದು. ಉದಾ: ಅಷ್ಟೇ ಅಲ್ಲದೇ, ಮತ್ತು , ಹಾಗೂ ಈ ಪದಗಳನ್ನು ಒಂದು ಉತ್ತರದಲ್ಲಿ 2 ಕ್ಕಿಂತ ಹೆಚ್ಚು ಸಾರಿ ಬರೆಯುವುದು.
  16. ದೀರ್ಘ ವಾಕ್ಯಗಳನ್ನು ಬರೆಯುವುದು ತಪ್ಪು. ದೀರ್ಘ ವಾಕ್ಯದಲ್ಲಿ ಬರೆದಿರುವುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ.
  17. ಸುಮ್ಮನೆ ಪುಟ ತುಂಬಿಸಲು ಏನೇನೋ ಬರೆಯುವುದು. ಉದಾ: ಪ್ರಶ್ನೆಯನ್ನೇ ತಿರುಗು ಮುರುಗು ಮಾಡಿ ಪೀಠಿಕೆಯಲ್ಲಿ ಬರೆಯುವುದು, ಕಥೆ ಬರೆಯುವುದು, ಇತ್ಯಾದಿ.
  18. ಮೊದಲ 15 ಪ್ರಶ್ನೆಗೆ ಉತ್ತರಗಳನ್ನು ಚೆನ್ನಾಗಿ ಬರೆದು, ಕೊನೆಯ ಪ್ರಶ್ನೆಗಳಿಗೆ ಉತ್ತರಗಳನ್ನು ಬೇಕಾಬಿಟ್ಟಿಯಾಗಿ ಗೀಚುವುದು: ಅಕ್ಷಮ್ಯ ಅಪರಾಧ.

ಪರೀಕ್ಷಾ ಸರಣಿ ಆಯ್ಕೆ ಮತ್ತು ಬರೆಯುವಾಗ ಮಾಡುವ ತಪ್ಪುಗಳು

  1. ನಮಗೆ ನಾವು ಮಾಡಿಕೊಳ್ಳುವ ಮೋಸ: ಪರೀಕ್ಷಾ ಸರಣಿಯಲ್ಲಿ ಬಂದಷ್ಟೇ ಅಂಕಗಳು ಮುಖ್ಯ ಪರೀಕ್ಷೆಯಲ್ಲಿ ಬರುತ್ತವೆ ಎಂಬ ಭ್ರಮೆ.
  2. ಯಾವುದೇ ಟೆಸ್ಟುಗಳನ್ನು ಬರೆಯದೆ ನೇರವಾಗಿ ಮುಖ್ಯ ಪರೀಕ್ಷೆ ಬರೆಯುವುದು.
  3. ಪರೀಕ್ಷಾ ಸಮಯದಲ್ಲಿ, ಪರೀಕ್ಷೆ ಹಿಂದಿನ ವಾರದಲ್ಲಿ ಮಾಡುವ ತಪ್ಪುಗಳು: ಪರೀಕ್ಷೆಗೆ ಐದು ದಿನಗಳಿರುವಾಗ simulation ಟೆಸ್ಟ್ ಗಳನ್ನು ಬರೆಯುವುದು.
  4. ತಪ್ಪಿನ ಪುನರಾವರ್ತನೆ: ನೋಟ್ಸ್ ಮಾಡುವುದು, ಹಾಗು ಹೊಸ ನೋಟ್ಸ್ ಸಂಗ್ರಹಿಸುತ್ತಿರುವುದು.
  5. Present situation: ಸರ್ ಗಳಿಗೆ ಸಮಯವಿರಲ್ಲ/ ಅವರು ನಿನಗೆ ಪ್ರತ್ಯೇಕ ಸಮಯ ಕೊಡಲ್ಲ: ಸರ್ ಗಳ ಜೊತೆ ವಿಷಯ, ಉತ್ತರಗಳನ್ನು ಚರ್ಚಿಸದೇ ಇರುವುದು. (ತರಗತಿಗಳನ್ನು ಕೇಳುವುದು ಚರ್ಚೆಯಲ್ಲ)

ಪರೀಕ್ಷೆಯ ಹಿಂದಿನ 5 ದಿನಗಳ ಅವಧಿಯಲ್ಲಿ ಮಾಡುವ ತಪ್ಪುಗಳು

  1. ಪರೀಕ್ಷೆಯ ಹಿಂದಿನ ದಿವಸ ತಡರಾತ್ರಿವರೆಗೂ ಅಭ್ಯಾಸ ಮಾಡುವುದು.ಪರೀಕ್ಷಾ ಸಮಯದಲ್ಲಿ ಸರಿಯಾಗಿ ಓದದಿರುವ ಪಠ್ಯಕ್ರಮದ ಬಗ್ಗೆ ಚಿಂತಿಸುವುದು.
  2. ಭಾವಾರ್ಥ ಪದ್ಯದ ಸಂದರ್ಭ ತಿಳಿಯದಿದ್ದರೂ ಯಾವುದೋ ಪರ್ವ, ಆಶ್ವಾಸ, ಸಂಧಿ ಅನ್ನು Wild Guess ಮಾಡಿ ಬರೆಯುವುದು.
  3. ದೇವರಿಗೆ ಮಾತ್ರ ಅರ್ಥವಾಗುವಂತೆ ಬರೆಯುವುದು. (Illegible handwriting: ಬರೆದವನಿಗೂ ಓದಲು, ಸಾಧ್ಯವಾಗದಂತೆ ಬರವಣಿಗೆಯಲ್ಲಿ ಪರೀಕ್ಷೆ ಬರೆಯುವುದು).
  4. ಪುಟ ತುಂಬಿಸುವ ಪ್ರಯತ್ನದಲ್ಲಿ ಪ್ರಶ್ನೆಗಳನ್ನು ಖಾಲಿ ಬಿಟ್ಟು ಬರುವುದು.
  5. ಮುಖ್ಯ ಪರೀಕ್ಷೆಯಲ್ಲಿ ಪುಟ ತುಂಬಿಸಿದರೆ ಅಂಕ ಗ್ಯಾರಂಟೀ ಎಂಬ ತಪ್ಪು ಕಲ್ಪನೆ.

Leave a Comment

Your email address will not be published. Required fields are marked *

Unlock Your IAS Dream – Enroll Now for the GS Foundation Batch 2026!

Scroll to Top